![]() |
---|
|
![]() |
|||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
![]() |
ಹೊಸದೇನಿದೆ/Whats New :
|
|||||||||||||||||||||||||
ಕನ್ನಡ ಸಾಂಸ್ಕೃತಿಕ ಸಂಘ: ೧೯೭೧ರಲ್ಲಿ ರಾವೈಪ್ರದ ಕೆಲವು ಕನ್ನಡಾಭಿಮಾನಿಗಳು ಗ್ರಂಥಾಲಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಕನ್ನಡ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿದರು. ನಂತರ ೧೯೭೪ರಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ವಿಜ್ಞಾನವು ಸುಲಭವಾಗಿ ಅರ್ಥವಾಗುವಂತೆ ಪ್ರಯೋಗಶಾಲೆಯ ಹಲವಾರು ವಿಜ್ಞಾನಿಗಳು ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆದುಕೊಡಲು ಮುಂದಾದರು. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕನ್ನಡದಲ್ಲಿ ವಿಜ್ಞಾನ ಪ್ರಬಂಧಗಳ ಸ್ಪರ್ಧೆಯನ್ನು ಆಯೋಜಿಸಿ, ಬಹುಮಾನಿತ ಲೇಖನಗಳನ್ನು ಪ್ರಕಟಿಸುವ ಪ್ರಯತ್ನಗಳೂ ನಡೆದವು. ಈ ಲೇಖನಗಳನ್ನು ಪ್ರಕಟಿಸಲು “ಕಣಾದ” ಎಂಬ ವಿಜ್ಞಾನ ಪತ್ರಿಕೆಯನ್ನು ೧೯೭೫ರಲ್ಲಿ ಆರಂಭಿಸಲಾಯಿತು. ಸಂಘವು ಈ ವಿಜ್ಞಾನಪತ್ರಿಕೆಯನ್ನು ಸತತವಾಗಿ ೪೭ ವರ್ಷಗಳಿಂದ ಪ್ರಕಟಿಸುತ್ತಾ ಬಂದಿದ್ದು, ಈಗ ಕರ್ನಾಟಕದಲ್ಲಿ “ಕಣಾದ”ವು ಮನೆಮಾತಾಗಿದೆ. ೨೦೨೧-೨೨ ಕನ್ನಡ ಸಾಂಸ್ಕೃತಿಕ ಸಂಘಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ. ಈ ಸುಸಂದರ್ಭವನ್ನು ಅರ್ಥವತ್ತಾಗಿ ಆಚರಿಸಲು ರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಂಡು ಕನ್ನಡದ ಬೆಳವಣಿಗೆಗೆ ಕಟೀಬದ್ಧವಾಗಿದೆ |
||||||||||||||||||||||||||
|
|
|||||||||||||||||||||||||
|
ಪತ್ರ ವ್ಯವಹಾರದ ವಿಳಾಸ: | |||||||||||||||||||||||||
|
|