ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ
೪೨ನೇ ಕಣಾದ ಸಂಚಿಕೆಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಲೇಖನಗಳನ್ನು ಆಹ್ವಾನಿಸಲಾಗಿದೆ --:--ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆ - ೨೦೧೬

 

1971ರಲ್ಲಿ ಗ್ರಂಥಾಲಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಕೆಲವು ಕನ್ನಡಾಭಿಮಾನಿಗಳು ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳಲ್ಲಿ (ಆಗ ರಾಷ್ಟ್ರೀಯ ವೈಮಾನಿಕ ಪ್ರಯೋಗಶಾಲೆಯಾಗಿತ್ತು) ಕನ್ನಡ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿದರು. ಅನಂತರ 1974ರಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಪ್ರಯೋಗಶಾಲೆಯ ಹಲವಾರು ವಿಜ್ಞಾನಿಗಳು ಕನ್ನಡದಲ್ಲಿ ಲೇಖನಗಳನ್ನು ಬರೆದುಕೊಡುವ ಆಸಕ್ತಿ ತೋರಿಸಿದರು. ಅಲ್ಲದೆ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಸ್ಪೂರ್ತಿ ನೀಡಲು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ,ತೀರ್ಪುಗಾರರು ಆಯ್ಕೆಮಾಡಿದ ಲೇಖನಗಳನ್ನು ಪ್ರಕಟಿಸುವ ನಿರ್ಧಾರ ಸಹ ಮಾಡಲಾಯಿತು. ಈ ಲೇಖನಗಳನ್ನು ಒಳಗೊಂಡ ಒಂದು ವಾರ್ಷಿಕ ಪತ್ರಿಕೆಯನ್ನು ಹೊರತರಲು ಸಂಘವು ತೀರ್ಮಾನಿಸಿತು. ಅಂದಿನ ಪ್ರಯೋಗಶಾಲೆಯ ನಿರ್ದೇಶಕರು ಇದಕ್ಕೆ ಪ್ರೋತ್ಸಾಹ ನೀಡಿದರು. ಈ ಪತ್ರಿಕೆಗೆ ಕಣಾದ ಎಂಬ ಋಷಿಯ ಹೆಸರಿನಿಟ್ಟು ನಾಮಕರಣ ಮಾಡಲಾಯಿತು. ಈ ಪತ್ರಿಕೆಯನ್ನು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದಂದು ಬಿಡುಗಡೆ ಮಾಡಲಾಗುತ್ತಿದೆ. ಇದನ್ನು ಬಿಡುಗಡೆ ಮಾಡಲು ಕನ್ನಡದ ಕಣ್ಮಣಿಗಳಾದ, ಡಾ. ಶಿವರಾಮ ಕಾರಂತ, ಡಾ.ಯು.ಆರ್.ಅನಂತ ಮೂರ್ತಿ, ಜಿ.ಪಿ.ರಾಜರತ್ನಂ, ಜಿ.ಶಿವರುದ್ರಪ್ಪ, ಪು.ತಿ.ನರಸಿಂಹಚಾರ್, ಎಮ್.ವಿ.ಸೀತಾರಾಮಯ್ಯ, ಜಿವಿ, ಬೀಚಿ, ಹೀಗೆ ಹಲವಾರು ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರೆಂದು ಹೇಳಲು ಬಹಳ ಹೆಮ್ಮೆಯಾಗುತ್ತದೆ. ಇದುವರೆವಿಗೆ 37 ಸಂಚಿಕೆಗಳು ಹೊರಬಂದಿದೆ. ಈ ವರ್ಷ 23 ನವಂಬರ್ 2012 ರಂದು ಸಂಘವು 38ನೇ ಸಂಚಿಕೆಯನ್ನು ಬಿಡುಗಡೆಮಾಡುವ ಸಂಭ್ರಮದಲ್ಲಿದೆ.


ಅಲ್ಲದೆ, ಸಂಘವು ಇತರ ಚಟುವಟಿಕೆಗಳಾದ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಸಂಘದ ಸದಸ್ಯರು ರಚಿಸಿದ ಕವನ ಸಂಕಲನಗಳ ಪ್ರಕಟಣೆ, ಪ್ರಯೋಗಾಲಯದ ನಿರ್ದೇಶಕರ ವರದಿಯ ಕನ್ನಡ ರೂಪಾಂತರ, ಪ್ರಯೋಗಾಲಯದ ಎಲ್ಲಾ ನಾಮಫಲಕಗಳ ಕನ್ನಡದ ಅನುವಾದ ಮುಂತಾದ ಕಾರ್ಯಗಳನ್ನೂ ಸಹ ಸಕ್ಷಮವಾಗಿ ನಿರ್ವಹಿಸುತ್ತಿದೆ.

 


ಕನ್ನಡ ಸಾಂಸ್ಕತಿಕ ಸಂಘ (ರಿ)
ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು (CSIR- National Aerospace Laboratories), ಹಳೆ ವಿಮಾನ ನಿಲ್ದಾಣ ರಸ್ತೆ
ಬೆಂಗಳೂರು - ೫೬೦೦೧೭
ದೂರವಾಣಿ: ೦೮೦ ೨೫೦೮೬೪೪೦ / ೨೫೦೮೬೪೨೬ / ೨೫೦೮೬೨೫೦ / ೨೫೦೮೬೩೪೩ / ೨೫೦೨೬೧೦೨